Featured Post

How Coaching Works

Coaching is a co-creative conversation and journey between a Coach and the Coachee to realize the potential of Coachee and achieve what he d...

Wednesday, November 11, 2020

ತಪ್ಪಾಯಿತು - ಕ್ಷಮಿಸಿ ಬಿಡಿ!!

"ತಪ್ಪು ಮಾಡುವುದು ಸಹಜ, ಆದರೆ ತಿದ್ದಿ ನಡೆಯುವವನು ಮನುಜ" ಎಂದು ಕೇಳಿದ್ದೇವೆ. ಎಷ್ಟೊಂದು ಸಲ ತಪ್ಪು ಮಾಡಿದಾಗ, ಅದು ಆಗಲೇ ಅರಿವಿಗೆ ಬಾರದಿರಬಹುದು/ಬರಬಹುದು. ನಾವು ಮಾಡಿದ್ದು ತಪ್ಪೆಂದು  ನಮಗೆ ಅನಿಸಿದಾಗ, ಸಹಜವಾಗಿ "ನನ್ನದು ತಪ್ಪಾಯ್ತು, ನನ್ನ ಕ್ಷಮಿಸಿ ಬಿಡಿ" ( I am sorry) ಎಂದು ಕೇಳಿಕೊಳ್ಳುತೇವೆ. 

ಇಲ್ಲಿ ತಿಳಿಯಬೇಕಾದ ಮುಖ್ಯ ಅಂಶವೆಂದರೆ, ಸುಖಾಸುಮ್ಮನೆ ಹೀಗೆ ಹೇಳೋದರಲ್ಲಿ ಹೆಚ್ಚು ಅರ್ಥ ಹಾಗೂ ಉಪಯೋಗವಿಲ್ಲ. ಏಕೆಂದರೆ, ಬಹಳಷ್ಟು ಸಲ ಈ ಕ್ಷಮಾ ಯಾಚನೆಯ ಮನೋಭಾವ ಬರುವುದು - ತನ್ನಿಂದ ಆದ ತಪ್ಪಿನ ಕೀಳಿರಿಮೆಯಿಂದಲೋ, ಮುಂದೇನು ಆಗುವೋದು? ಎನ್ನುವ ಭಯದಿಂದಲೋ ಆಗಿದ್ದು, ಆ ಭಾವನೆಗಳಿಂದ ಹೊರಬರುವ ಪ್ರಯತ್ನವಿರುತ್ತದೆ. ಇದು ಸಹಜವಾಗಿ ನಮ್ಮ ಅರಿವಿಲ್ಲದಂತೆ ಆಗುವ ಪ್ರತಿಕ್ರಿಯೆ. ಇದನ್ನು ಯಾರು ಬೇಕು-ಬೇಕಂತಲೇ ಮಾಡುವುದಿಲ್ಲ. ಈ ರೀತಿಯ ಕ್ಷಮಾ ಯಾಚನೆಯಲ್ಲಿ ಇನ್ನೊಂದು ನ್ಯೂನತೆಯೆಂದರೆ, ಇದರಲ್ಲಿ ತಾನು ಮಾಡಿದ ತಪ್ಪಿನಿಂದ ಬೇರೆಯವರಿಗೆ ಆಗಿರುವ ನೋವು, ತೊಂದರೆ, ಅವಮಾನ, ನಷ್ಟದ ಅರಿವು ಕ್ಷಮೆಯಾಚಿಸುವವನಲ್ಲಿ ಇರುವುದಿಲ್ಲ ಹಾಗೂ ಅವನಲ್ಲಿ ಯಾವುದೇ ಪರಿವರ್ತನೆಯನ್ನು ಇದು ತರುವುದಿಲ್ಲ. ಅವನು ಮತ್ತೆ-ಮತ್ತೆ ಇದೇ ರೀತಿಯ ತಪ್ಪನ್ನು ಅದೇ ವ್ಯಕ್ತಿಯ ಜೊತೆಗೋ ಅಥವಾ ಮತ್ತೊಬ್ಬರ ಜೊತೆಗೋ ಮಾಡುತ್ತಲೇ ಇರಬಹುದು! 

ಹಾಗಿದ್ದರೆ ಕ್ಷಮೆ ಯಾವ ರೀತಿ ಕೇಳಬೇಕು? ಎನ್ನುವುದು ಮುಂದಿನ ಪ್ರಶ್ನೆಯಾಗುತ್ತದೆ. ಕ್ಷಮೆ ಕೇಳುವಾಗ, ಕ್ಷಮೆ ಯಾಚಿಸುವವನಿಗೆ ಯಾಕೆ ಕ್ಷಮೆ ಕೇಳುತಿದ್ದೇನೆ? ಅನ್ನುವ ಅರಿವಿರಬೇಕು; ಈ ಅರಿವಿನಲ್ಲಿ -  ತನ್ನ ಭಾವನೆಗಳಿಗಿಂತ(ಕೀಳಿರಿಮೆ, ಭಯ), ಬೇರೆಯವರಿಗಾದ ತೊಂದರೆಯ ಅರಿವಿರಬೇಕು. ಇದನ್ನು ಒಂದು ಫಾರ್ಮುಲಾ ರೀತಿಯಲ್ಲಿ ಹೇಳಬಹುದಾದರೆ: "ನಾನು - <ಇಂತಹ ತಪ್ಪು ಮಾಡಿದೆ> . ಇದರಿಂದ ನಿಮಗೆ <ಇಂತಹ ತೊಂದರೆ > ಆಯಿತು. ನನ್ನನು ಕ್ಷಮಿಸಿ" ಎನ್ನಬಹುದು. ಹೀಗೆ ಕೇಳಿದಾಗ, ಕ್ಷಮೆಪಡೆದುಕೊಂಡವರಿಗೆ ಯಾಕೆ ಕ್ಷಮೆಯಾಚಿಸುತ್ತಿದ್ದಾನೆ ಎಂದು ಗೊತ್ತಾಗುವುದಲ್ಲದೆ ಒಂದು ವೇಳೆ ಅವರಿಗೆ ಬೇರೇನೇ ತೊಂದರೆ ಆಗಿದ್ದರೆ ಅವರು ಅದನ್ನು ತಿಳಿಸಬಹುದು. ಹಾಗೂ ಕ್ಷಮೆ ಯಾಚಿಸುವವನು,  ತಾನು ಏನು ತೊಂದರೆಯೆಂದು ಅಂದುಕೊಂಡಿದ್ದನೋ ಅದು ನಿಜವೋ? ಸರಿಯೋ? ಅಲ್ಲವೋ? ಅನ್ನುವುದು ಸಹ ಗೊತ್ತಾಗುತ್ತದೆ. ಈ ರೀತಿ ಮಾಡಲು ಕ್ಷಮೆಯ ಬಗ್ಗೆ ಸರಿಯಾಗಿ ಯೋಚನೆ ಮಾಡಬೇಕಾಗುತ್ತದೆಯಾದ್ದರಿಂದ, ಪರಿಣಾಮವಾಗಿ ಕ್ಷಮೆಯಾಚಿಸುವವನಲ್ಲಿ ಮನೋ ಸ್ಥೈರ್ಯ, ಬೇರೆಯವರಿಗೆ ಆದ ತೊಂದರೆಯ ಬಗ್ಗೆ ಅನುಕಂಪ(empathy) ಮೂಡುತ್ತದೆ. ಕ್ಷಮೆ ಪಡೆಯುವವರು ಇದನ್ನು ಪೂರ್ಣವಾಗಿ ಕೇಳಿದಲ್ಲಿ, ಇಬ್ಬರ ನಡುವೆ ಒಂದು ಉತ್ತಮ ಮಾತುಕತೆಗೆ ಇದು ಈಡು ಮಾಡಿಕೊಡುತ್ತದೆ.

ಇದೇ ರೀತಿ, ಕ್ಷಮೆ ಪಡೆದುಕೊಂಡವರು ಎಲ್ಲವನ್ನು ಪೂರ್ಣವಾಗಿ ಕೇಳದೆ, ಸುಮ್ಮನೆ - "Its Okay", "ಪರವಾಗಿಲ್ಲ"ಎಂದು ಹೇಳೋದರಲ್ಲಿ ಏನು ಅರ್ಥ ಇಲ್ಲ. ಯಾಕೆ ಇವನು ಕ್ಷಮೆ ಯಾಚಿಸುತ್ತಿದ್ದಾನೆಯೆಂದು ತಿಳಿದುಕೊಳ್ಳುವುದು ಮುಖ್ಯ. ಇಲ್ಲಿ - "ಪರವಾಗಿಲ್ಲ", "Its Okay"ಅಂತ ಹೇಳಬಾರದೆಂದು ಹೇಳುತ್ತಿಲ್ಲ. ಬದಲಾಗಿ ಕ್ಷಮೆ ಯಾಚಿಸುವವನ ಯೋಚನೆ ಹಾಗೂ  ಭಾವನೆಗಳನ್ನು ತಿಳಿಯಲು ಪ್ರಯತ್ನಿಸಬೇಕು. ಇದರಿಂದ ಅವರನ್ನು ಹಾಗೂ ಅವರು ಯೋಚಿಸಲು ಪಟ್ಟ ಪರಿಶ್ರಮವನ್ನು   ಗೌರವಿಸಿದ ಹಾಗೆ ಆಗುತ್ತದೆ. ಅಲ್ಲದೆ, ತನ್ನನ್ನು ಪೂರ್ಣವಾಗಿ ಕೇಳಿದ್ದರಿಂದ, ಅವರಿಗೆ ಹೇಳುವುದೇನು ಇರುವುದಿಲ್ಲವಾಗಿ, ಒಂದು ರೀತಿಯ ಮುಕ್ತತೆಯ ತೃಪ್ತಿಯೂ ಮೂಡುತ್ತದೆ.  

ಇಬ್ಬರ ಈ ರೀತಿಯ ಕ್ಷಮಾ ಸಂಭಾಷಣೆಯಿಂದ, ಇಬ್ಬರಲ್ಲೂ ಹಿಂದಿನ ಕಹಿ ಘಟನೆ ಮನಸ್ಸಿನಲ್ಲಿ ಸಂಪೂರ್ಣವಾಗಿ ಗುಣಮುಖವಾಗಿ, ಈ ಘಟನೆಯನ್ನು ಹಿಂದೆ ಬಿಟ್ಟು ಮುಂದೆ ನಡೆಯಲು ಸಹಕರಿಸುತ್ತದೆ. ಒಂದು ವೇಳೆ, ಇಬ್ಬರಲ್ಲಿ ಒಬ್ಬರು ಮಾತ್ರ ಈ ರೀತಿಯಾಗಿ ವರ್ತಿಸಿದರೆ ಏನಾಗಬಹುದು?! ಎನ್ನುವುದು ಮುಂದಿನ ಸಹಜ ಪ್ರಶ್ನೆ. ಆ ಒಬ್ಬರ ವರ್ತನೆಯಿಂದ ಕ್ಷಮಾ ಸಂಭಾಷಣೆಯು ಎಷ್ಟೋ ಪರಿಣಾಮಕಾರಿಯಾಗಿ ಬರುತ್ತದೆಯಲ್ಲದೆ, ಇನ್ನೊಬ್ಬರ ಮೇಲೆ ಕನಿಷ್ಠ ಪಕ್ಷದ ಗುಣಮುಖದ ಪರಿಣಾಮ ಮೂಡಿಸುತ್ತದೆ.

ಇದೆ ರೀತಿಯ ವಿಧಾನವನ್ನು ಒಬ್ಬರಿಗೆ "ಥಾಂಕ್ ಯು" ಹೇಳುವಾಗ ಕೂಡ ಮಾಡಬಹುದು: "ನಿಮ್ಮ <ಈ ಕೆಲಸದಿಂದ> ನನಗೆ <ಈ ರೀತಿಯ > ಸಹಾಯ ಆಗಿದೆ. ಅದಕ್ಕೆ ಥಾಂಕ್ ಯು", ಎಂದು ಹೇಳಿದಾಗೆ, ಕೇಳುವವರಿಗೆ, ಹೇಗೆ ತಮ್ಮ ಕೆಲಸದಿಂದ ಬೇರೆಯವರಿಗೆ ಅನುಕೂಲವಾಗಿದೆಯೆಂದು ತಿಳಿದು ಸಂತೋಷ ಹಾಗೂ  ತಮ್ಮ ಬಗ್ಗೆ ತಮಗೆ ಹೆಮ್ಮೆಯಾಗುತ್ತದೆ. ಹಾಗೂ  ಇದೆ ಸಹಾಯವನ್ನು ಮತ್ತೆ ಬೇರೆಯವರಿಗೆ ಮಾಡಲು ಅವರಿಗೆ ಸ್ಪೂರ್ತಿ ಕೊಡುತ್ತದೆ. ಇದನ್ನೇ, ಸುಮ್ಮನೆ "ಥ್ಯಾಂಕ್ಸ್" ಅಂತ ಹೇಳುವುದಕ್ಕೆ ಹೋಲಿಸಿ ನೋಡಿ. ವ್ಯತ್ಯಾಸ ನಿಮಗೆ ಗೊತ್ತಾಗುತ್ತದೆ.

ಇದೆಲ್ಲ ತುಂಬಾ ಸಾಹಿತಿಕವಾಗಿ ಹೇಳುವ ರೀತಿಯೆಂದು ಅನಿಸುತ್ತಿರಬಹುದು. ಆದರೆ, ಇದನ್ನು ಸಹಜವಾಗಿ ಆಡು ಭಾಷೆಯಲ್ಲೇ ಹೇಳಬಹುದು. ಇಲ್ಲಿ - ಕ್ಷಮೆ ಯಾಚಿಸುವ ಅಥವಾ ಥ್ಯಾಂಕ್ಸ್ ಹೇಳುವ ರೀತಿಯನ್ನು ತಿಳಿಯುವುದು ಮುಖ್ಯ. ಹೇಳುವ ರೀತಿ ನಿಮಗೆ ಬಿಟ್ಟಿದ್ದು. 

ನಿಮಗೆ ಇದು ಸರಿ ಹಾಗೂ ಪರಿಣಾಮಕಾರಿಯೆಂದು ಅನಿಸಿದ್ದು, ಇದನ್ನು ಈಗಲೇ ಉಪಯೋಗಿಸಬೇಕೆನಿಸಿದ್ದರೆ, ಮೇಲೆ ತಿಳಿಸಿದ ಥಾಂಕ್ ಯು ಫಾರ್ಮುಲಾ ಬಳಸಿ, ಕಾಮೆಂಟ್ಸ್ ಮೂಲಕ ನಿಮಗೆ ಹೇಗೆ ಅನಿಸಿತು ಅನ್ನುವುದನ್ನು ನನಗೆ ತಿಳಿಸಿ :) 

Sunday, May 3, 2020

Understanding - "What is Identity", Through the Movie Bala

With soft skills training becoming so prevalent, the terms like identity, fulfillment, contentment, presence, consciousness, integrity are used left, right and center. They seem to be the words 10,000 ft high in the sky. But, what do they mean in the daily life and how do they manifest? I use movies as one channel to make sense of these words. One such movie that I watched recently is Bala, a movie on identity loss. It is not about identity crisis, which is a struggle, at the switch from one identity to an another. It is about the loss of an existing identity and trying to regain that identity only.

So, what is identity? Identity is anything with which one is identified. If this identity is not there, it is not possible to recognize him. For ex: your name is your identity. If someone shouts your name, you turn around, no matter where you're. OR, consider you're entering the office and you learn that you've lost your ID card. So, how can security person know that you're the Mr.X?


The movie is about a protagonist 'Balamukund'(aka Bala), who identified himself with his silky 'hairs'. There is his childhood friend, Latika,who is force identified with her dark skin. And Bala's wife Pari, who identifies herself with beauty, however, with total awareness.


Since the school days, Bala identified himself with his hairs, which are like that of Shahrukh Khan(SRK). So, he mimics SRK and often seen running his fingers through his hairs often. Girls ran around him and liked him, all because of his hairs and hair style and his mimicking of SRK. However, as he enters his youth(20's and above), he starts losing his hairs. In other words, he starts losing his identity. Who is he now, as he doesn't have hairs? Hairs gave him happiness and a self-pride. Now, what is he for which he can be happy and proud of? Not having hairs is another identity too. But, he doesn't want take this new identity. Out of all the identities he possess, he values this identity through hairs very much. Because, this gave him highest recognition. 


Latika is born with dark complexion. Both Bala and the society, recognized her through her color. Though she claims to have accepted it, she didn't. It was evident in her sensitive reactions (anger and sadness) to any one who commented on the color. The difference with her is, she was given(pushed) this identity, unlike the case of Bala. And it was not a pleasant one. She didn't like to cover her skin tone with any cosmetics.


The third character is of Pari, whom Bala gets married to. She identifies herself with her beauty. She is very OK with her identity and she stands for it. She clearly calls it out that she couldn't get more than 40-50 marks in the school and her all identified her through her beauty. So, she chose to be a model, makes tik-tok videos and enters ad industry and keeps everything beautiful. Her life is all meaningful because of beauty. Though, this is an external identity, as in the case of Bala and Pari, she was very clear of why she choose it and what options she had/didn't had.


When Bala's identify is taken off, he creates hell out of his life at his home - with his father, brother and a hair saloon friend; Takes all the advice to grow his hairs like to pluck his pubic hairs and stick them on his head, to apply cow dung paste on his head, positive thinking, etc. Pari also creates hell out of her life, when she learns that Bala is bald, after marriage. Her identify with beauty is broken and so, she breaks her marriage with Bala.


So, in nutshell, the movie shows an identity with hair, color and beauty, what happens when this identity is lost or damaged. It is not wrong to have an identity. All have an identities, even if we despise it. However, if it is hindering the growth, then it is better to check that identity. We create them or accept them on many parameters like job, dress, finance, intelligence etc. One can as well retrospect on these questions:


  • How did you create identity in your life - are they given or have you chosen them?
  • Are these external identifies, which are temporary? Like: Hair style, color, beauty, economic status, iPhone, possessions etc.
  • Are these internal identifies, which can stay always with you? Like: intelligence, emotional maturity, strengths, weaknesses etc.
  • Are your identities making you feel superior or inferior?
  • Are you identifying with body(as is the case with all the charters in this movie) or thinking or values?
  • What does spirituality say about identity with 'soul', when it asks the question - "Who am I?"?
  • How are the multiple identities clashing with each other? Like: Non-veggie v/s Religious; Talkative in company v/s Introvert at home;
  • How are your identities clash with your partner's identities? Like: Generous v/s Self protective, Rich v/s Poor, Veggie v/s Non-Veggie, Intelligence v/s Possessions, Secure v/s Courageous.
Hope, the article has helped you to understand what is identity and helped you to enjoy the movie with this view. Please feel free to share your thoughts or comments.

Thursday, March 26, 2020

ಅಗಲಿಕೆಯ ನೋವು ಹಾಗೂ ಹೊಸತರದ ಆಗಮನ

ಅಗಲಿಕೆಯ ನೋವು ಎಲ್ಲರನ್ನು ಕಾಡುತ್ತದೆ. ಎಷ್ಟೋ ಸಿನಿಮಾಗಳು ಓಡುವುದು ಈ ಅಗಲಿಕೆಯ ನೋವಿನ ಮೇಲೇನೆ. ಈ ಅಗಲಿಕೆ ವ್ಯಕ್ತಿ ಅಥವಾ ವಸ್ತು, ಅಂದರೆ ಜೀವಂತ ಅಥವಾ ನಿರ್ಜೀವ ವಸ್ತುವಿನ ಜೊತೆಗೆ ಆಗಬಹುದು. ಮೂಲತಃ ಆ ವ್ಯಕ್ತಿ ಅಥವಾ ವಸ್ತುವಿನ ಜೊತೆಗೆ ಅಲ್ಲಿಯತನಕ ಭಾವನಾತ್ಮಕ ಸಂಬಂಧ ಬೆಳೆದಿರಬೇಕು.

ನನ್ನ ಈ ಬರಹದಲ್ಲಿ, ಈ ರೀತಿ ಅಗಲಿಕೆಯಾದಾಗ ಒಬ್ಬ ವ್ಯಕ್ತಿ ಆಂತರಿಕವಾಗಿ ಏನನ್ನು ಅನುಭವಿಸುತ್ತಾನೆ ಹಾಗೂ ಇದರಿಂದ ಹೇಗೆ ಹೊರಗೆ ಬರಬಹುದು ಅನ್ನುವುದನ್ನು ವಿವರಿಸಲು ಯತ್ನಿಸಿದ್ದೇನೆ. ಪ್ರತಿಸಲವೂ, ಒಬ್ಬ ವ್ಯಕ್ತಿ ಅಗಲಿಕೆಯನ್ನು ಐದು ಹಂತಗಳಲ್ಲಿ  ಪಯಣಿಸುತ್ತಾನೆ. ಇವುಗಳನ್ನು ಹಂತ-ಹಂತವಾಗಿ ಅನುಭವಿಸಿದರು, ಹಿಂದೆ-ಮುಂದೆ ಚಲನೆಯಾಗುತ್ತಿರುತ್ತದೆ. ಆ ವ್ಯಕ್ತಿಗೆ ಈ ಹಂತಗಳ ಬಗ್ಗೆ ಅರಿವಿರಲಿ, ಇರದೇ ಇರಲಿ, ಈ ಹಂತಗಳ ಮೂಲಕ ನೋವನ್ನು ವಿವಿಧ ರೀತಿಯಲ್ಲಿ ಅನುಭವಿಸೆಯೇ ತೀರುತ್ತಾನೆ. ಈ ಎಲ್ಲ ಹಂತಗಳು ಮುಗಿದಾಗ, ಕಳಚಿದ ಸಂಬಂಧ ಅಥವಾ ವಸ್ತುವಿನಿಂದ ಹೊರಬಂದು ಹೊಸ ಸಂಬಂಧ, ಹೊಸ ವಸ್ತುಗಳಿಗೆ ಮಾನಸಿಕವಾಗಿ ಜಾಗವನ್ನು ಸೃಷ್ಟಿಸಿ, ಅವನ್ನು ತನ್ನ ಜೀವನದಲ್ಲಿ ಪೂರ್ಣವಾಗಿ ಬರಮಾಡಿಕೊಳ್ಳುತ್ತಾನೆ. ಈ ಅಗಲಿಕೆಯ ಘಟನೆಗಳು ಯಾವಾಗಲು ಕೆಟ್ಟವೇ ಆಗಿರಬೇಕೆಂದಿಲ್ಲ, ಅವು  ಒಳ್ಳೆಯವು ಆಗಿರಬಹುದು.

ಈ ವಿಷಯದ ಬಗ್ಗೆ ೧೯೬೯ ರಲ್ಲಿ ಅಮೆರಿಕಾದ ಮನಶಾಸ್ತ್ರಜ್ಞೇ ಎಲಿಜೆಬೆತ್ ಕುಬ್ಲೇರ್-ರೋಸ್ ತನ್ನ "On Death and Dying" ಎನ್ನುವ ಪುಸ್ತಕದಲ್ಲಿ ಬರೆದಳು.

ಮೊದಲ ಹಂತ: ತಿರಸ್ಕರಿಸುವಿಕೆ (Denial): ನನಗಿದು ಆಗಿಲ್ಲಾ, ನನಗೆ ಆಗದಿರಬಹುದು, ನಾನು ಗಟ್ಟಿಯಾಗಿಯೇ ಇದೀನಿ ಅನ್ನುವ ಭಾವನೆ.

ಎರಡನೇ ಹಂತ: ಸಿಟ್ಟು (Anger): ನನಗೆ ಯಾಕೆ ಹೀಗೆ ಆಗೋದು?, ಅಗಲಿದವರ ಮೇಲೆ ಅಥವಾ ಬೇರೆಯವರ ಮೇಲೆ ವಿನಾಕಾರಣ ಸಿಟ್ಟಾಗುವುದು,  ಈ ರೀತಿಯ ವರ್ತನೆ.

ಮೂರನೇ ಹಂತ: ಚೌಕಾಶಿ (Bargaining): ಒಂದೇ ಒಂದು ಸಲ ಅವಕಾಶ ಕೊಡಿ, ದೇವ್ರೇ ಹೆಂಗಾದ್ರೂ ಮಾಡಿ ಇದರಿಂದ ಪಾರು ಮಾಡಪ್ಪ ನಿನಗೆ ಪೂಜೆ ಸಲ್ಲಿಸ್ತೀನಿ, ಸ್ವಲ್ಪ ಬೇಗನೆ ಡಾಕ್ಟರ್ ಹತ್ರ ಕರ್ಕೊಂಡು ಹೋಗಿದ್ರೆ...ಹೀಗೆ ಆಗ್ತಿರಲಿಲ್ಲ. ಈ ರೀತಿಯ ಯೋಚನೆಗಳು.

ನಾಲ್ಕನೆಯ ಹಂತ: ಖಿನ್ನತೆ (Depression): ಬೇರೆ ಕೆಲಸಗಳಲ್ಲಿ ಆಸಕ್ತಿ ಕಳೆದು ಕೊಳ್ಳುವುದು - ಹವ್ಯಾಸ, ಸಂಬಂಧ, ಹಣ-ಕಾಸು ವಿಷಯಗಳು, ಯಾವುದರಲ್ಲೂ ಆಸಕ್ತಿ ಇಲ್ಲವಾಗುವಿಕೆ.

ಐದನೇ ಹಂತ: ಒಪ್ಪಿಕೊಳ್ಳುವಿಕೆ (Acceptance): ಜೀವ ಹಾಗೂ ಜೀವನ ಸದಾ ಬದಲಾವಣೆ ಆಗುತ್ತಿರುವ ವಾಸ್ತವ ಅನ್ನುವ ಅರಿವನ್ನು ಒಪ್ಪಿಕೊಳ್ಳುವುದು, ಸ್ವತಃ ಅಂಗೀಕರಿಸುವುದು.

ಇಲ್ಲಿ ಕೆಲವೊಂದು ಉದಾಹರಣೆಗಳನ್ನು ನೋಡೋಣ. ಇಲ್ಲಿ ದಪ್ಪ ಮಾಡಿದ ಶಬ್ದಗಳು ಬೇರೆ-ಬೇರೆಯ ಹಂತಗಳಲ್ಲಿ ಆಗುವ ಪ್ರತಿಕ್ರಿಯೆಗಳ ಬಗ್ಗೆ ತಿಳಿಸುತ್ತವೆ.

೧) ಮಗು ಮೊದಲನೆಯದಾಗಿ ಶಾಲೆಗೆ ಹೋಗುವಾಗ: (ಮನೆಯಿಂದ ಅಗಲಿಕೆ) 
ಪ್ರತಿ ತಂದೆ-ತಾಯಿಯ ಜೀವನದಲ್ಲಿ ಇಂದೊಂದು ಪ್ರಮುಖ ಘಟನೆ. ಅಲ್ಲಿಯ ತನಕ ಮಗುವಿಗೆ ಮನೆ, ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಮನೆಯ ಅಂಗಳ, ತನ್ನ ಆಟದ ಸಾಮಾನು ಇವೆ ಪ್ರಪಂಚ. ಇವುಗಳ ಸುರ್ಪದಿಯಲ್ಲೇ ಅದು ಬೆಳೆದಿರುತ್ತದೆ. ಇದು ಅದರ ಸುಭದ್ರ ಕೋಟೆ. ಶಾಲೆಯಲ್ಲಿ ಎಲ್ಲವು ಹೊಸತು, ಎಲ್ಲರು ಹೊಸಬರು - ಅಲ್ಲಿಯ ಗೋಡೆ, ಎಲ್ಲರೊಂದಿಗೆ ಹಂಚಿಕೊಳ್ಳಬಹುದಾದ ಆಟದ ಸಾಮಾನುಗಳು, ಟೀಚರ್, ಬೇರೆ ಮಕ್ಕಳು. ಶಾಲೆಗೆ ಹೋಗಬೇಕಾದರೆ ಅದು ತನ್ನ ಹಳೆಯ ಸಂಬಂಧವನ್ನು ಕಳಚಿಕೊಳ್ಳಲೇ ಬೇಕು.
ಮೊದಮೊದಲು ಅದು ತಿರಸ್ಕರಿಸುತ್ತದೆ. ಅದರ ಶಾಲೆ-ಬೇಡ ಅನ್ನುವ ಹಠವೇ ಅಧಿಕ. ಪ್ರತಿದಿನ ಶಾಲೆಗೆ ಹೋಗಿಬಂದ ಮೇಲೆ, ಇದೆ ಕೊನೆ ಏನೋ ಮಟ್ಟಿಗೆ ಅದು ಖುಷಿಯಾಗಿರುತ್ತೆ. ಈ ಶಾಲೆಗೇ ಹೋಗುವ ಕ್ರಿಯೆ ಹೀಗೆ ದಿನವೂ ನಡೆದಾಗ, ಅದು ಸಿಟ್ಟು ತೋರಿಸಲು ಶುರು ಮಾಡುತ್ತದೆ - ಕಿರುಚುವುದು, ಕಚ್ಚುವುದು, ಸಾಮಾನುಗಳನ್ನೂ ಬಿಸಾಡುವುದು. ಇದು ಮುಂದುವರಿದಂತೆ, ಶಾಲೆಗೇ ಹೋಗಿಬಂದ ಮೇಲೆ ಚಾಕ್ಲೆಟ್, ಐಸ್ ಕ್ರೀಮ್, ಹೊಸ ಆಟದ ಸಾಮಾನು ಪಡೆಯುತ್ತ ಅಥವಾ ಅವು ಸಿಗುತ್ತವ ಅನ್ನುವ ಆಸೆಯಲ್ಲಿ ಹೋಗಿ ಬರುತ್ತಿರುತ್ತದೆ. ಕೆಲವೊಮ್ಮೆ ಶಾಲೆಯ ವಾತಾವರಣಕ್ಕೆ ಹೊಂದಾಣಿಕೆಯಾಗದ ಮಕ್ಕಳು ಮಂಕು ಬಡಿದ  ಹಾಗೆ ಮೌನಿಗಳಾಗಿ ಬಿಡುತ್ತವೆ, ಬಿಟ್ಟು-ಬಿಟ್ಟು ಜ್ವರ ಬರುವುದು ಆಗುತ್ತಿರುತ್ತದೆ. ಆದರೆ ಬಹಳಷ್ಟು ಮಕ್ಕಳು ಈ ಹಂತದಲ್ಲಿ ಬಹಳ ಹೊತ್ತು ಇರುವುದಿಲ್ಲ. ಅಂತಿಮವಾಗಿ ಅದು ಸಂಪೂರ್ಣವಾಗಿ ಶಾಲೆಗೇ ಹೊಂದಿಕೊಂಡು ಬಿಡುತ್ತದೆ. ಇದು ಅದರ ಸಾಮಾಜಿಕ ಜೀವನಕ್ಕೆ ನಾಂದಿಯಾಗುತ್ತದೆ. ಈ ಹಂತಗಳನ್ನು ಸಾಗಿ ಹೋಗುವಾಗ, ಹಂತ-ಹಂತವಾಗಿ  ಹೊಸ ಟೀಚರ್, ಹೊಸ ಗೆಳೆಯ-ಗೆಳತಿಯರು, ಹೊಸ ವಾತಾವರಣ, ಹೊಸ ಅಕ್ಷರಗಳು, ಹೊಸ ಹಾಡುಗಳು, ಹೊಸ ಡಾನ್ಸ್ ಎಲ್ಲವು ಅದರ ಜೀವನದ ಅಂಗವಾಗಿಬಿಡುತ್ತವೆ.

೨) ಸಂಬಂಧವನ್ನು ಕಳೆದುಕೊಂಡಾಗ:
ಇಲ್ಲಿ ಯಾವುದೇ ಸಂಬಂಧದ ಅಗಲಿಕೆ ಆಗಿರಬಹುದು, ಸಾವು, ಡೈವೋರ್ಸ್, ಜಗಳ ಹಾಗೂ ವಿಮನಸ್ಸಿನಿಂದ ಅಗಲುವಿಕೆ ಹೀಗೆ ಹಲವಾರು. ಕೆಲವು ಪ್ರಮುಖ ಸಂಬಂಧಗಳ ಸುತ್ತ-ಮುತ್ತವೆ ನಮ್ಮ ಜೀವನ ಹೆಣೆದು ಕೊಂಡಿರುತ್ತದೆ. ಗಂಡನ ಸಾವಿನ ಉದಾಹರಣೆಯನ್ನು ಪರಿಗಣಿಸೋಣ: ಮೊದಮೊದಲು ಅವರು ತೀರಿಕೊಂಡಿದ್ದಾರಾ ಅನ್ನೋದನ್ನೇ ೪-೫ ಸಲ ಪರೀಕ್ಷಿಸುತ್ತೇವೆ. ಇನ್ನೊಮ್ಮೆ ನೋಡಿ ಅನ್ನುವ ಭರವಸೆ. ಕೆಲವೊಮ್ಮೆ ಸುದ್ದಿ ಕೇಳಿದಾಗ - ನಿಜವಾಗ್ಲೂ?,  ಸುಮ್ನೆ ತಮಾಷೆ ಮಾಡಬೇಡಿ ಅಥವಾ ದಂಗು ಬಡಿದವರ ಹಾಗೆ ಸುಮ್ಮನಾಗಿ ಬಿಡುವುದು. ನಂತರ, ಯಾಕೆ ಹೀಗೆ ನನ್ನ ಬಿಟ್ಟು ಹೋದರೆಂದು ಸಿಟ್ಟು, ಎಷ್ಟೋ ಕೆಲಸಗಳು (ಮನೆಯ ಆಸ್ತಿ, ಮಕ್ಕಳ ಮದುವೆ) ಅರ್ಧಕ್ಕೆ ಉಳಿದವು ಅನ್ನುವ ಸಿಟ್ಟು, ಅಸಹಾಯಕತೆ ಕಾಣಿಸುತ್ತದೆ. ನಂತರದಲ್ಲಿ, ಸ್ವಲ್ಪ ಸಿಹಿ ತಿನ್ನೋದು ಕಡಿಮೆ ಮಾಡಿದ್ದರೆ, ಸ್ವಲ್ಪ ಬೇಗನೆ ಡಾಕ್ಟರ್ ಹತ್ರ ಕರ್ಕೊಂಡು ಹೋಗಿದ್ದರೆ, ಒಂದೇ ಒಂದು ಸಲ ಅವರನ್ನು ನಗುತಾ ಮಾತಾಡಿರಬೇಕಿತ್ತು, ಒಮ್ಮೆ ನನಗೆ ಕನಸಲ್ಲಿ ಬಂದು ಮಾತಾಡಿದರೆ ಹೀಗೆ ಹಲವಾರು ಯೋಚನೆಗಳು. ನಂತರ, ಛೇ! ಅವರಿಲ್ಲದ ಈ ಜೀವನಕ್ಕೆ ಅರ್ಥ ಆದರೂ ಏನು? ಏನ್ ಮಾಡಿದ್ರೆ ಏನು, ಬಿಟ್ರೆ ಏನು? ಊಟ, ನಿದ್ರೆ, ಹವ್ಯಾಸ, ಸಂಬಂಧಿಕರಲ್ಲಿ ಸಂಪರ್ಕ ಯಾವುದರಲ್ಲೂ ಆಸಕ್ತಿಯ ಕಳೆದುಕೊಳ್ಳುವುದು. ಕೊನೆಗೆ, ಇದು ಜೀವನದ ಪಯಣದ ಒಂದು ಭಾಗ, ಋಣ ಇಲ್ಲಿಯ ತನಕವಿತ್ತು ಎನ್ನುವುದನ್ನು ಒಪ್ಪಿಕೊಂಡು ಮಗ, ಮಗಳು, ಅಳಿಯ, ಸೊಸೆ, ಮೊಮ್ಮಕ್ಕಳು, ಸಂಬಂಧಿಕರಗಳ ಜೊತೆ ಹೆಚ್ಚು ಹೆಚ್ಚು ಬೆರೆಯುತ್ತಾ, ಅವರ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುತ್ತ ಅವರುಗಳಲ್ಲಿ ಹೆಚ್ಚು-ಹೆಚ್ಚು ಒಂದಾಗುತ್ತೇವೆ.

೩) ವಸ್ತುವಿನ ಅಗಲಿಕೆ: 
ಈ ಅಗಲಿಕೆ ನಿರ್ಜೀವ ವಸ್ತುವಿನ ಜೊತೆಗೂ ಆಗಬಹುದು. ಬೆಲೆಬಾಳುವ ವಸ್ತುವನ್ನು ಕಳೆದು ಕೊಂಡಾಗ, ಭಾವನಾತ್ಮಕವಾಗಿ ಬೆಸೆದುಕೊಂಡಿರುವ ವಸ್ತುಗಳನ್ನು ಬಿಡಬೇಕಾದಾಗ, ಒಂದು ಪ್ರದೇಶವನ್ನು ಬಿಟ್ಟು ಹೋಗುವಾಗ, ಬೇರೆ ಮನೆಗೆ ಹೋಗುವಾಗ,  ಹಾಗೆಯೇ ಇಟ್ಟ - ನಮ್ಮ ಮಕ್ಕಳು ಶಿಶುಗಳಾಗಿರುವಾಗಿನ ಬಟ್ಟೆ, ಅಜ್ಜಿಯ ಸೀರೆ, ಹಳೆಯ ಪುಸ್ತಕ ಹೀಗೇ ಹಲವಾರು.

ಹಣವಿರುವ ಪರ್ಸ್, ವ್ಯಾನಿಟಿ ಬ್ಯಾಗ್ ಅಥವಾ ಮೊಬೈಲ್ ಕಳೆದು ಕೊಂಡಾಗ, ಮೊದಮೊದಲು ಅದನ್ನು ಬಹಳಷ್ಟು ಹುಡುಕುತ್ತೇವೆ. ಹೊರಗೆ ಕಳೆದು ಕೊಂಡಿದ್ದರು, ಮನೆಯಲ್ಲೇ ಬಿಟ್ಟಿವೆನೋ, ಆಫೀಸಲ್ಲಿ ಬಿಟ್ಟಿವೆನೋ ಅಂತ ಮತ್ತೊಮ್ಮೆ ಹೋಗಿ ನೋಡುತ್ತೇವೆ. ನಾನು ಕಳೆದು ಕೊಂಡಿರಲು ಚಾನ್ಸ್ ಇಲ್ಲಾ ಅನ್ನೋ ಬಲವಾದ ನಂಬಿಕೆಯಲ್ಲಿಯೇ ಇರುತ್ತೇವೆ. ನಂತರ ನಮ್ಮ ಮೇಲೆ ನಮಗೆ ಸಿಟ್ಟು, ಯಾರೋ ಅವಸರ ಮಾಡಿದಕ್ಕೆ ಅವರ ಮೇಲೆ ಸಿಟ್ಟು, ಅದೇ ಸಮಯದಲ್ಲಿ ಯಾರಾದರೂ ಏನಾದರು ಕೇಳಿದರೆ ಅವರ ಮೇಲೆ ಸಿಟ್ಟು, ಜನರು ಯಾಕೆ ಕಳ್ಳತನ(ಕಳುವಾದಲ್ಲಿ) ಮಾಡುತ್ತಾರೆ, ಅವರಿಗೆ ಮನಸಾಕ್ಷಿ ಇರೋಲ್ವಾ? ಅನ್ನುವ ಸಿಟ್ಟು. ನಂತರ, ಅಯ್ಯೋ ದೇವರೇ ಹೇಗಾದರೂ ಮಾಡಿ ಇದು ಸಿಗುವ ಹಾಗೆ ಮಾಡಪ್ಪ ಅಂತ ಕೇಳಿಕೊಳ್ಳುತ್ತೇವೆ, ಅಥವಾ ಯಾರಾದರೂ ಇದನ್ನು ತಿರುಗಿಸಿ ಕೊಟ್ಟರೆ ಅವರಿಗೆ ಬಹುಮಾನ ಕೊಡುವ ಯೋಚನೆ. ಕೆಲವೊಮ್ಮೆ, ನಾನು ಹಿಂದೆ ಮಾಡಿದ  ತಪ್ಪಿಗೆ ಇದು ಶಿಕ್ಷೆ ಆಗಿದೆ ಅನ್ನುವ ಯೋಚನೆ. ಯಾರ ಸಹಾಯವು ದೊರಕದಿದ್ದಾಗ, ಕಳೆದುಕೊಂಡಿದ್ದರ ಬಗ್ಗೆ ಖಿನ್ನತೆ, ಬೇಜಾರು, ಊಟ ಮಾಡಲು, ನಿದ್ದೆ ಮಾಡಲು ಆಗದಿರುವುದು. ಕೊನೆಗೆ - ಇದು ಇನ್ನು ಕಳೆದು ಹೋಗಿದೆ ಅಂತ, ಒಪ್ಪಿಕೊಂಡು ಕಳೆದು ಹೋದ ಹಣವನ್ನು ಮತ್ತೆ ಗಳಿಸುವ ರೀತಿ, ಹೊಸ ಪರ್ಸ್ ಅಥವಾ ಮೊಬೈಲ್ ಅನ್ನು ಕೊಂಡುಕೊಳ್ಳಲು ನಿರ್ಧರಿಸುತ್ತೇವೆ.

೪) ಸದ್ಯದ ಕೊರೊನ ವೈರಸ್ ಗೆ ನಾವು ಪ್ರತಿಕ್ರಿಯಿಸುತ್ತಿರುವ ರೀತಿ: (ಆರೋಗ್ಯ ಹಾಗೂ ಶಾಂತತೆಯಿಂದ ಅಗಲಿಕೆ)
ಬಹಳಷ್ಟು ಜನ ತಮಗೆ ಇದು ಬರುವುದಿಲ್ಲ, ಬಂದಿಲ್ಲ ಅನ್ನೋ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅದಕ್ಕೆ ಸರ್ಕಾರ ಎಷ್ಟೇ ಹೇಳಿದರು ಜನ ಗುಂಪುಗಳಲ್ಲಿ ಬರುವುದು, ಹೊರಗಡೆ ತಿರುಗುವುದು ಮಾಡುತ್ತಲೇ ಇದ್ದಾರೆ. ಇವರ ಮೂಲ ನಂಬಿಕೆ - ಎಲ್ಲರಿಗೂ ಆಗಬಹುದು, ನನಗೆ ಆಗುವುದಿಲ್ಲ ಅನ್ನುವುದೇ. ಇನ್ನು ಕೆಲವರು - ಈ ಚೀನಾದವರು ತಿನ್ನೋದು ಇರಲಿ ನಾವೆಲ್ಲಾ ಅನುಭವಿಸಬೇಕು, ಏರ್ಪೋರ್ಟ್ ನಲ್ಲಿ ವಿಮಾನಗಳನ್ನು ನಿಲ್ಲಿಸೋ ಬದಲು, ನಮಗಿಲ್ಲಿ ಹೊರಗೇ ಹೋಗಬೇಡಿ ಅನ್ನೋದು ಏನು ನ್ಯಾಯ?  ಅನ್ನೋ ಸಿಟ್ಟಲಿ ಇದ್ದಾರೆ. ಮೋದಿ, ಸ್ವಲ್ಪ ಮೊದಲೇ ಈ ಹೋಂ ಕ್ವಾರಂಟೈನ್ ತರಬೇಕಿತ್ತು, ಸ್ವಲ್ಪ ಮೊದಲೇ ಈ ವಿದೇಶದಿಂದ ಬರುವವರನ್ನು ನಿಲ್ಲಿಸಬೇಕಿತ್ತು, ಬರಿ ಹೋಂ ಕ್ವಾರಂಟೈನ್ ನಿಂದ ಏನಾಗುತ್ತೆ, ಆಸ್ಪತ್ರೆ ಹಾಗೂ ಸೌಕರ್ಯ ಕೊಡಬೇಕು ಎನ್ನುವ ಯೋಚನೆ ಗಳಲ್ಲಿ ಕೆಲವರು ಇದ್ದಾರೆ. ಇನ್ನು ಇಟಲಿಯಲ್ಲಿ ಅಲ್ಲಿನ ಕೆಲವು ನಾಗರಿಕರು ಕೈ ಚೆಲ್ಲಿ, ಅಸಹಾಯಕರಾಗಿ ಕುಳಿತಿದ್ದಾರೆ, ಜನರನ್ನು ಸಾಯಲು ಬಿಡುತ್ತಿದ್ದಾರೆ. ಇದರ ಕೊನೆಯ ಹಂತದಲ್ಲಿ ಜಗತ್ತು ಹೇಗೆ ಇದನ್ನು ಸ್ವೀಕರಿಸುತ್ತೆ ಅನ್ನುವುದನ್ನು ನಾವು ನೋಡಬೇಕು.

ಕೆಲವೊಂದು ಅಗಲಿಕೆಗಳು ಪೂರ್ವಸಿದ್ಧತೆಯಾಗಿರುತ್ತವೆ. ಉದಾಹರಣೆಗೆ, ಮನೆಯಲ್ಲಿ ವಯಸ್ಸಾದವರು ಅಗಲಿದಾಗ ಇದು ಅಷ್ಟೊಂದು ತೀವ್ರವಾಗದಿರಬಹುದು, ಏಕೆಂದರೆ, ಈ ಸೃಷ್ಟಿಯ ನಿಯಮಕ್ಕೆಎಲ್ಲರೂ ಸಿದ್ಧರಾಗಿರುತ್ತಾರೆ. ಈ ಅಗಲಿಕೆಯ ಅನುಭವ ದೈನಂದಿಕ ಜೀವನದಲ್ಲೂ ಆಗಬಹುದು. ಉದಾಹರಣೆಗೆ, ಆಫೀಸಿನಿಂದ ಮನೆಗೆ ಬಂದ ಮೇಲೆ, ಆಫೀಸಿನ ವಿಚಾರಗಳಿಂದ ಇನ್ನು ಅಗಲಿಕೆ ಆಗಿರುವುದಿಲ್ಲ, ಅಲ್ಲಿಯ ಸಿಟ್ಟು, ಭಯ, ಏನ್ ಮಾಡಿದರೆ-ಏನ್ ಆಗಬಹುದು ಅನ್ನುವ ಯೋಚನೆ, ಹೀಗೆ ಅದರ ಗುಂಗಿನಲ್ಲೇ ಇರುತ್ತಾನೆ. ಎಲ್ಲಿಯತನಕ ಆಫೀಸಿನಿಂದ ಅಗಲಿಕೆ ಆಗುವುದಿಲ್ಲವೋ ಅಲ್ಲಿಯ ತನಕ ಊಟ, ಮನೆಯವರೊಂದಿಗೆ, ಮಕ್ಕಳೊಂದಿಗೆ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳುವುದು ಕಷ್ಟ.  ಈ ರೀತಿ ಕೆಲವೊಂದು ಅಗಲಿಕೆಗಳು ಬೆಳವಣಿಗೆಗೆ ಪೂರಕವಾಗಿವೆ. 

ಹೀಗೆ, ಪ್ರತಿ ಅಗಲುವಿಕೆಯಲ್ಲಿ ವಿವಿಧ ಹಂತಗಳ ಮೂಲಕ ಪ್ರತಿ ವ್ಯಕ್ತಿಯೂ ಚಲಿಸುತ್ತಾನೆ. ಹೊಸ ಸಂಬಂಧಗಳ  ಆಗಮನ, ಕೊನೆಯ ಹಂತದಲ್ಲಿ ಆಗಿರಬೇಕಂತಿಲ್ಲ. ಪ್ರತಿ ಹಂತಗಳಲ್ಲಿ ಮುಂದುವರಿಯುತ್ತಿದ್ದಂತೆ, ಹೊಸ ಸಂಬಂಧ ಹುಟ್ಟಿಕೊಳ್ಳುತ್ತಾ-ಕಟ್ಟಿಕೊಳ್ಳುತ್ತಾ ಹೋಗುತ್ತದೆ. ಕೆಲವೊಮ್ಮೆ ಇವೆಲ್ಲ ಹಂತಗಳನ್ನೂ ಕೆಲವೇ ದಿವಸಗಳ್ಳಲಿ ಕಳೆದುಬಿಟ್ಟರೆ, ಕೆಲವೊಮ್ಮೆ ವರ್ಷಗಳೇ ತಗಲಬಹುದು. ಇದು ಆ ಅಗಲಿಕೆಯ ತೀವೃತೆಯ ಮೇಲೆ, ಇದನ್ನು ಅನುಭವಿಸುತ್ತಿರುವ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ನಿರ್ಭರಿಸಿರುತ್ತದೆ. ಈ ಹಂತಗಳ ಅರಿವಿದ್ದಲ್ಲಿ, ಅಗಲಿಕೆಯ ನೋವನ್ನು ಅನುಭವಿಸುತ್ತಿರುವ ವ್ಯಕ್ತಿ ವೃಥಾ - "ನಾನೇಕೆ ಹೀಗೆ?" ಅಂತ ಟೀಕಿಸಿಕೊಳ್ಳುವುದರ ಬದಲು, ತನ್ನ ಮೇಲೆ ಅನುಭೂತಿ ಬೆಳೆಸಿ ಕೊಳ್ಳುತ್ತಾನೆ. ಹಾಗೆಯೇ ಸಾಕಷ್ಟು ಸಮಯ ಒಂದೇ ಹಂತದಲ್ಲಿ ನಿಂತುಕೊಂಡಲ್ಲಿ, ಮನೋವೈದ್ಯರ ಸಲಹೆ ಪಡೆಯುವಲ್ಲಿ ದಿಕ್ಸೂಜಿಯಾಗುತ್ತದೆ. ಹಾಗೂ, ಇದೆ ರೀತಿ ಬೇರೆಯವರು ಅಗಲಿಕೆಯ ನೋವನ್ನು ಅನುಭವಿಸುತ್ತಿದ್ದಾಗ ಅವರಿಗೆ ಸಹಕರಿಸಲು, ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಸುಖಾ ಸುಮ್ಮನೆ - "ಎಷ್ಟು ದಿನ ಅಂತ ಹೀಗೆ ಇರ್ತೀಯ?" ಅನ್ನುವ ಮಾತುಗಳನ್ನು ಎಚ್ಚರಿಕೆಯಿಂದ ಆಡುವ ಹಾಗೆ ಮಾಡುತ್ತದೆ.

ನಿಮ್ಮ ಜೀವನದ ಯಾವುದೇ ಅಗಲಿಕೆಯ ಘಟನೆಗಳಿದ್ದರೆ ಮೇಲಿನ ಯಾವ ಹಂತದಲ್ಲಿದಿರಿ ಅನ್ನುವುದನ್ನು ನೋಡಿಕೊಳ್ಳಿ.  ನಿಮಗೆ ಬೇಕಾದಷ್ಟು ಸಮಯ ಕೊಟ್ಟುಕೊಳ್ಳಿ. ಆದರೆ ಒಂದೇ ಹಂತದಲ್ಲಿ ಸಾಕಷ್ಟು ಸಮಯ ಕಳೆದಿದ್ದರೆ(ಅಂತ ನಿಮಗೆ ಅನಿಸಿದರೆ)  ಮನೋವೈದರ ನೆರವು ಪಡೆಯಿರಿ. ಕೇವಲ ಈ ಹಂತಗಳ ಬಗ್ಗೆ ಅರಿವಿದ್ದಲ್ಲಿ, ಅದು ಎಷ್ಟೋ ನೆರವಾಗುತ್ತದೆ.








Tuesday, March 3, 2020

The Pain of Separation and Growth After It.

It is painful to separate with any person or object with whom one is attached to. In the pain of separation, each person goes thru Grief cycle, which has 5 stages of: Denial - Anger - Bargaining - Depression - Acceptance. Each time one completes this cycle, the person grows by creating a new space for the new things, new relations and all the new opportunities. Whether one is aware or not aware, these are the stages a person goes through during the grieving time.

Consider the event of the child going to the school for the first time. In parent's life this is a big event of the baby and sometimes even parents also break down seeing their child crying. If you're a nursery teacher, you know the events on the 1st of the school! The child, so far, has grown up at home with all the known people - appa, amma, ajja, ajji and may be elder bro/sis. School is altogether new place for it. Its a change of environment in terms of physical place, toys, people, type of relations, kind of dressing, routine...and so-on. It is literally a separation from all the current attachments. The child's first response is for this separation is Denial. Everyday, it gets up with an assumption that it needn't have to go to school. Of course, for its tender age, it won't know that it is denying.  Then, it gets into the Anger stage by crying, getting angry and showing temper tantrums. As the days pass by and going to school becomes pattern, the child would say - "I don't want to go today", "Get me chocolate when I return from school", "Come in bike to pick me up", OR taking some toys to school, going on its tricycle to school etc. So, its willing to go with some bargains. Not every child may go through a depression stage, as they are thriving with life and energy and they don't have much expectations. And finally, it will reach the stage of Acceptance and would start going to school everyday as though its a normal event. All these happen over a period of few weeks to few months. In the whole process of completing this cycle, 
a new space is gradually created for it to develop new set of attachments - friends, teachers, school (stepping stone into society), routine, learning, toys and so-on.  

Understanding of the above stages would help in understanding the feelings of the child and its stages when it is going through a change. So, not every cry is bad. The above kind of crying is for grieving which leads to the growth of the child. Navigating thru this cycle enables the child to handle the separations in future, which would be a norm through out the life. Moreover this is not the first experience of the child as it would have gone through such separation experience when it moved out of womb.

Irrespective of the age, whenever a person goes through a separation, he will be going 
through the above stages. And this navigation happens linearly, back & forth, with some stages being navigated quickly and some slowly. Till the time, one holds onto the loss, it is difficult to get into new space and relationships that leads to growth. Each person, based on his personality and the severity of the loss takes different amount of time to go through this cycle. It may even take years. It doesn't help in pushing by saying - "how long will you be like this"! Rather, it would help, if he is provided with the space for the grieving process. Sometimes a therapy or counselling may help.


The above losses are in physical dimension. There are separations in subtle dimensions too and the grieving process applies there as well. Consider a person deeply attached to a plan, and the reality throws a different scene. Like someone who couldn't get a software engineer job and so picked up teaching as career; Wanted to be an artist, but, landed up doing business ; Was waiting for the bus, but, it didn't turn up; Wanted to go home, but, got an urgent work from manager and have to stay back; Couldn't travel from foreign for sister's wedding because of Corona virus. There was a great attachment to these plans and it is now separated. All these are grieved. This grieving process of separation happens with non-living things too: loss of mobile, moving to different place, loss of money and so-on. 

This doesn't mean to say - just ditch a relationship or the plan or an expectation or an object, that is now lost and move on. As human beings, we are designed to get attached and build the relationship, both with living and non-living things. 

One might have seen or heard of people among relatives and friends who behaved very maturely with losses and cope up with it well. Knowingly or unknowingly they are going through these stages and reach the stage of acceptance quickly. That's what is the indicator of their maturity.That is why it is said that if one has to grow, one has to accept.